ಇದೊಂದು ರಾಜಕೀಯ ಸಂಘಟನೆ
ಕರ್ನಾಟಕದಿಂದ ಹೊಸ ರಾಜಕೀಯ ಜಾಗೃತಿಯೊಂದರ ಆರಂಭ
ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಬದಲಿಸಿದರೆ ರಾಜಕೀಯ ಬದಲಾಗುವುದಿಲ್ಲ
ಇಂದಿನ ರಾಜಕೀಯ ಬದಲಾಗದೆ ಇದ್ದರೆ ಭಾರತ ದೇಶ ಉಳಿಯುವುದಿಲ್ಲ
ಸಂವಿಧಾನ ಸಾರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವ ಬಂಧುತ್ವದ ಆಶಯಗಳನುಸಾರ ರಾಜಕೀಯವನ್ನು ಮರುರೂಪಿಸಲು
ಕರ್ನಾಟಕದ ನೆಲದಲ್ಲೊಂದು ಚಿಂತನೆ ಮತ್ತು ಕಾರ್ಯಾಚರಣೆಯ ರಾಜಕೀಯ ಪ್ರಯೋಗ....
ಫೆಬ್ರುವರಿ 23, 2025 ಭಾನುವಾರ, ಕರ್ನಾಟಕ ರಾಜ್ಯಾದ್ಯಂತ
ರಾಜಕೀಯ ಸಂಘಟನೆಯಾಗಿ ಜಾಗೃತ ಕರ್ನಾಟಕದ ಘೋಷಣೆ
ರಾಜಕೀಯ ಪಕ್ಷವಲ್ಲ – ಆದರೂ ಚುನಾವಣಾ ರಾಜಕೀಯವನ್ನು ಬದಲಿಸುವ ಗುರಿ
ರಾಜಕೀಯ ಒಳ್ಳೆಯವರಿಗಲ್ಲ ಎಂಬುದನ್ನು ಸುಳ್ಳಾಗಿಸುವ ಆಕಾಂಕ್ಷೆ
ರಾಜಕಾರಣ ಬದಲಾಗದೆ ದೇಶದಲ್ಲಿ ಏನೂ ಬದಲಿಸಲಾಗದು ಎನ್ನುವ ನಿಲುವು
ತತ್ ಕ್ಷಣದ ಕಾರ್ಯಕ್ರಮಗಳು
1
ಚುನಾವಣಾ ರಾಜಕೀಯವನ್ನು ಹಣ, ಜಾತಿ ಮತ್ತು ಧರ್ಮದ್ವೇಷದ ಪ್ರಭಾವದಿಂದ ಬಿಡುಗಡೆಗೊಳಿಸಿ ಚುನಾವಣೆ ಗೆಲ್ಲುವ ಹೊಸ ಮಾರ್ಗಗಳ ಅನ್ವೇಷಣೆ; ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದಂತೆ ಸಾಮಾನ್ಯ ಜನರ ನಾಡಿಮಿಡಿತ ಅರ್ಥಮಾಡಿಕೊಳಬಲ್ಲ, ನಿಸ್ವಾರ್ಥ, ಸೇವಾ ಮನೋಭಾವದ ಸಮರ್ಥ ವ್ಯಕ್ತಿಗಳು ರಾಜಕೀಯ ಪ್ರವೇಶ ಮಾಡುವ ವಾತಾವರಣ ನಿರ್ಮಿಸುವುದು; ರಾಜಕೀಯವನ್ನು ಪರಿವರ್ತನೆಯ ಪ್ರಬಲ ಅಸ್ತ್ರವನ್ನಾಗಿ ಬಳಸುವುದು.
2
ಬಿಜೆಪಿ ಮತ್ತು ಆರ್.ಎಸ್.ಎಸ್. ಸೇರಿದಂತೆ ಮೂಲಭೂತವಾಗಿ ಸಂವಿಧಾನವನ್ನೇ ಒಪ್ಪದ ರಾಜಕೀಯ ಪಕ್ಷ ಮತ್ತು ಸಂಘಟನೆಗಳನ್ನು ಸಮಾಜದ ಮುಖ್ಯವಾಹಿನಿಯಿಂದ ಕಿತ್ತೊಗೆಯಲು ಜನಜಾಗೃತಿ ಮೂಡಿಸುವುದು. ಸಂವಿಧಾನದ ಚೌಕಟ್ಟಿನೊಳಗೆ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳಲ್ಲಿ ಪರಿವರ್ತನೆಗಾಗಿ ಪ್ರಯತ್ನ.
3
ಅಭಿವೃದ್ಧಿ ಸಾಧಿಸುವುದು ಎಂದರೆ ಏನು, ಅಭಿವೃದ್ಧಿಯ ಹೆಸರಲ್ಲಿ ಮಾಡಲೇ ಬೇಕಿರುವ ಮತ್ತು ಮಾಡಲೇ ಬಾರದ ವಿಚಾರಗಳ ಬಗ್ಗೆ ಜಿಜ್ಞಾಸೆ ನಡೆಸಿ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳನ್ನು ಮರುರೂಪಿಸುವುದು.
ಈ ಮೂರೂ ಆಯಾಮಗಳಲ್ಲಿ ಕೈಗೊಳ್ಳಲಿರುವ ನಿರ್ದಿಷ್ಟ ಕಾರ್ಯಕ್ರಮಗಳನ್ನು ನಿರೀಕ್ಷಿಸಿ
ನಾನೇಕೆ ಜಾಗೃತ ಕರ್ನಾಟಕವನ್ನು ಸೇರಿಕೊಂಡೆ
ಡಾ|| ವಾಸು ಹೆಚ್ ವಿ
ಸ್ವಂತ ಬಂಧುಗಳಿಗೆ ದುಡ್ಡು ಕೊಟ್ಟು ಓಟಾಕಿಸುವ ಸ್ಥಿತಿ ಬಂದಿರುವಾಗ ರಾಜಕೀಯ ನಮ್ಮನ್ನು ಎಲ್ಲಿಗೆ ಕರ್ಕೊಂಡು ಹೋಗ್ತಿದೆ?
ಸುಚಿತ್ರಾ
ನಾನೇಕೆ ಜಾಗೃತ ಕರ್ನಾಟಕ ಸೇರಿದೆ?
ರಾಜಶೇಖರ್ ಅಕ್ಕಿ
ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಬೇಕೆಂದು ಮುಂಬೈಗೆ ಹೋಗಿದ್ದ ರಾಜಶೇಖರ್ ಅಕ್ಕಿಯವರು ವಾಪಸ್ ಕರ್ನಾಟಕಕ್ಕೆ ಬಂದಿದ್ದೇಕೆ?
ಮುತ್ತುರಾಜ್
ಮುತ್ತುರಾಜ್ ಅವರಿಗೆ ರಾಜಕೀಯ ಏಕೆ ಮುಖ್ಯವೆನಿಸುತ್ತಿದೆ?
ಸೀತಾಲಕ್ಷ್ಮಿ
ಕಾರ್ಪೊರೇಟ್ ಉದ್ಯೋಗವಿದ್ದರೂ ನಾನೇಕೆ ರಾಜಕಾರಣ ಸೇರುತ್ತಿದ್ದೇನೆ?
ಡಾ.ಬಿ.ಸಿ ಬಸವರಾಜ್
ಡಾ.ಬಿ.ಸಿ ಬಸವರಾಜ್‌ರವರು ತಮ್ಮ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ ಹೊಸ ರಾಜಕೀಯ ಮಾಡಲು ಬಂದಿದ್ದೇಕೆ?
ಸುಹೇಲ್ ಅಹ್ಮದ್
DYSP ಹುದ್ದೆಗೆ ರಾಜೀನಾಮೆ ನೀಡಿದ ಸುಹೇಲ್ ಅಹ್ಮದ್ ಈಗೇನು ಮಾಡುತ್ತಿದ್ದಾರೆ?
ಮೋಹನ್
IAS ಮತ್ತು KAS ಸ್ಪರ್ಧಾರ್ಥಿಗಳಿಗೆ ಕೋಚ್ ಮಾಡುವ ಮೋಹನ್ ಅವರು ಜಾಗೃತ ಕರ್ನಾಟಕ ಸೇರಿದ್ದೇಕೆ?